ಅಭಿಪ್ರಾಯ / ಸಲಹೆಗಳು

ಮರಗಾಲು ಕುಣಿತ

ಕೋಲಾರ, ಧಾರವಾಡ, ಮಂಡ್ಯ, ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಗಾಲು ಕುಣಿತವು ಕಂಡು ಬರುತ್ತದೆ. ಹಬ್ಬ, ಜಾತ್ರೆ, ಉತ್ಸವ ಸಂದರ್ಭದಲ್ಲಿ ಗ್ರಾಮೀಣರಿಗೆ  ಇದೊಂದು ಮನರಂಜನೆ.

 

ಮರಗಾಲು ಹಗುರವಾಗಿದ್ದು ಗಟ್ಟಿಯಾಗಿರಬೇಕು. ಆದ್ದರಿಂದ ಪಾಲವಾಣ, ಎಸಳಿ (ಮಿಟ್ಟಿಮರ) ಮೊದಲಾದ ಮರಗಳಿಂದಲೇ ಮರಗಾಲನ್ನು ಮಾಡುತ್ತಾರೆ. ಇದು ಐದಾರು ಇಂಚು ಸುತ್ತಳತೆಯನ್ನು ಹೊಂದಿರುತ್ತದೆ. ಎರಡು ಮರದ ತುಂಡುಗಳ ಮೇಲ್ಭಾಗದಲ್ಲಿ ಪಾದವನ್ನು ಊರಲು ಅನುವಾಗುವಂತೆ ಮೆಟ್ಟಿಲಿನ ಆಕಾರದಲ್ಲಿ ‘ಕಂಡು’ ಮಾಡಿ ಮರವನ್ನು ನಯಗೊಳಿಸಲಾಗುತ್ತದೆ. ಅದರ ಕೆಳಭಾಗದಲ್ಲಿ ಗೆಜ್ಜೆ ಕಟ್ಟಲು ಅನುಕೂಲವಿರುವಂತೆ ಮಾಡಿರುತ್ತಾರೆ.

 

ಮರಗಾಲನ್ನು ಕಟ್ಟಿಕೊಳ್ಳುವುದಕ್ಕೆ ಮೊದಲು ಮೊಣಕಾಲಿನವರೆಗೆ ಬಟ್ಟೆ ಸುತ್ತಿಕೊಳ್ಳುತ್ತಾರೆ. ಅನಂತರ ಹಿಮ್ಮಡಿಯ ಮೇಲೆ ಹೆಜ್ಜೆ ಭಾರ ಬೀಳುವಂತೆ ಮರಗಾಲುಗಳ ಮೇಲೆ ನಿಂತು ಅದನ್ನು ಭದ್ರವಾಗಿ ಕಾಲಿಗೆ ಕಟ್ಟುತ್ತಾರೆ. ಕೆಲವು ಮರಗಾಲುಗಳಿಗೆ ಮಂಡಿಯವರೆಗೆ ಅಡ್ಡಪಟ್ಟಿಗಳು ಇರುತ್ತವೆ. ಇವು ಕಾಲುಗಳ ಎಡ ಮತ್ತು ಬಲಗಡೆಯ ಹೊರಮೈಗೆ ಬರುತ್ತವೆ. ಇದನ್ನು ಕಟ್ಟುವುದಕ್ಕೆ ಮೃದುವಾಗಿಯೂ, ಗಟ್ಟಿಯಾಗಿಯೂ, ಸಣ್ಣದಾಗಿಯೂ ಇರುವ ಸೆಣಬಿನ ದಾರ ಅಥವಾ ಬಾಳೆಯ ನಾರನ್ನು ಬಳಸುತ್ತಾರೆ.

 

ಮರಗಾಲು ಕುಣಿತ ಸಂದರ್ಭದಲ್ಲಿ ಹಾಕುವ ವೇಷವು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ರಾಜ- ರಾಣಿ ವೇಷ ಹಾಕುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಮರಗಾಲು ಕುಣಿತ ಅತ್ಯಂತ ವಿಶೇಷದ್ದು.

 

 

ಇತ್ತೀಚಿನ ನವೀಕರಣ​ : 13-06-2023 03:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080